Interesting tale of 6 different stories of revange

With all the expensive setup this Argentine anthology film Relatos salvajes directed by Damián Szifron is very very well made both scriptwise n the narration. 6 very different stories of revenge / anger which bursts out coz of stress , clubbed together to make a film with loads of funny moments ,brutality,unpredicted twists and no time is wasted in the storytelling.

All the stories look new on screen or someway they made to look like that. I felt 2 stories could have been ended in a better way . An open ending to them could have made them far more interesting. ( car n engineer’s story) . A story about negotiation reminds you shankarnag’s epic Accident, the scene where owner requests his servant to act as culprit instead of his own son and there after that it’s a completely different storyline. N its very interesting too. Last story was too much melodrama n should have been cut short n needed a better treatment. While its true that six stories separately would have made very good short films individually , telling many stories like this in a film sticking to a theme needs special skills . A viewer might get irritated as he got used to usual narration style of lengthy stories which starts slowly n gets momentum.after that. One more problem with the many story pattern is some stories may turnout exceptional on screen where as some may not. This could be a problem when you rate a film as a whole. But wild tales manages all that very well . Film has interesting opening credits backdrop where director shows you wild life photographs n thereby indicating the base theme on which all the stories based on . Argentina’s submission for the Best Foreign Language film in Oscar race justifies its title with tenacious storytelling .

ನೆಹರೂ ನಿವೃತ್ತರಾಗುವುದಿಲ್ಲ

neh

ಕಳೆದೆರಡು ವಾರದಲ್ಲಿ ಎನ್ ಡಿ ಟಿ ವಿ ಯಲ್ಲಿ ಪ್ರಸಾರವಾಗುತಿದ್ದ ನೆಹರೂ ಸಮಾಜವಾದ , ಆರ್ಥಿಕ ನೀತಿಗಳ ಮೇಲಿನ ಚರ್ಚೆ ಮತ್ತು ಇಂದಿಗೆ ಅದರ ಪ್ರಸ್ತುತತೆಯ ಬಗ್ಗೆ ಸಂವಾದಗಳನ್ನು ನೋಡುತಿದ್ದೆ . ಅದರ ನಡುವೆಯೇ ನೀರ್ಜಾ ಸಿಂಗ್ ಸಂಪಾದಿಸಿರುವ ನೆಹರೂ – ಪಟೇಲ್ ನಡುವಿನ ಪತ್ರ ವ್ಯವಹಾರಗಳನ್ನು ಓದುತಿದ್ದೆ . ಒಂದೇ ಬದಿಯಲ್ಲಿ ನಿಂತು ಓದುತಿದ್ದವನಿಗೆ ಇನ್ನೊಂದು ಮಗ್ಗಲಲ್ಲಿ ನಿಂತು ನೆಹರೂರನ್ನು ನೋಡುವ ಮನಸಾಯಿತು . ಅಷ್ಟೊತ್ತಿಗೆ ಗೆಳೆಯ Rajendra ತನ್ನ ವಾಲ್ ಮೇಲೆ ಅಡಿಗರ ಮೇಲೆ ಒಂದು ಚರ್ಚೆಯೊಂದನ್ನು ಶುರುವಿಟ್ಟುಕೊಂಡಿದ್ದ . ಅದನ್ನು ಓದುತಿದ್ದವನಿಗೆ ತಕ್ಷಣಕ್ಕೆ ಹೊಳೆದದ್ದು ಅಡಿಗರ “ನೆಹರೂ ನಿವೃತ್ತರಾಗುವುದಿಲ್ಲ” ಕವನ . ನೆಹರೂಗೆ ಇದ್ದ ಅಧಿಕಾರದ ಹಂಬಲ , ವಿಶ್ವ ನಾಯಕನಾಗುವ ಆಸೆ ಮುಂತಾದುಗಳನ್ನು ಅಣುಕಿಸುವ ಈ ಕವನ ತನ್ನ ಶಾಬ್ದಿಕ ವ್ಯಂಗ್ಯದಾಚೆಗೂ ನೆಹರೂರನ್ನು ಒಡೆದು ನೋಡುತ್ತದೆ .

ನೆಹರೂ ನಿವೃತ್ತರಾಗುವುದಿಲ್ಲ
ಇನ್ನೂ ಪರವಾ ಇಲ್ಲ .

ಗಾಳಿ ಯಂಥಾ ಪ್ರಕಾರ ಬೀಸಲು ಬಹುದು ;
ಮೋಡ ಸೂಸಲು ಬಹುದು ;
ಕೋಳಿ ಕೋಕೋ ಎಂದು ಕುಕಿಲ ಬಹುದು ,
ಕಾಗೆ ಬಂಗಾರವೇ ಆಗಿ ಬಾರಿ ಬಂಗಾರ ,
ಉದ್ದುದ್ದ ಮಾತುಗಳ ಕೊಂಡಿ ಕೊಂಡಿ ನಿಚ್ಚಣಿಕೆತುದಿ
ಅಲಕಾವತಿಖಜಾನೆ ಮೂಸದಿರದು ;
ಹರಿದೀತು ವಾಗ್ರೂಪದಲಿ ಹಾಲಿನ ಹಳ್ಳ
ತುಂಬಿಕೊಳ್ಳುವ ಹಾಗೆ ತಗ್ಗು – ತೆವರು ;
ಬುದ್ಡಿಸಮತೆ ಧಮಾಸು ಕೂಗಿಗೆಲ್ಲ ಸಫಾಯಿ ,
ಆಸೇತು ತುಹಿನಾಚಲ !

ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ
ಯಾವ ಬಂದಳಿಕೆಗೂ ಶಂಕೆ ಬೇಡ !
ಎರಡು ದೋಣಿಗೆ ಕಾಲನಿಟ್ಟು ಸಾಗುವ ಶೂರ,
ಇಲ್ಲದ ತ್ರತೀಯ ಕ್ರಮಕ್ಕೆ ಠಾವೆಲ್ಲೆಂದು ಕುದಿವ ಕುವರ;
ಬೇಸಿಗೆಯ ಗೆರೆತೊರೆಯ ಕನ್ನಡಿ ಜಲದ ಮೇಲೆ
ಮಳೆಗಾಳಿನೆಗಸುಗಳ ನಗುವ ವೀರ .
ಮುಗಿಲನೆಳೆಯುವ ಹೆಜ್ಜೆ ನೆಲಕೆ ಸೋಕಾದಿದ್ದಾರೆ ಸರಿಯೆ ;
ಬಲಿಯ ತಲೆಮುಟ್ಟುವುದೇ ಕಾರಭಾರ .
ಅಳಿವೆ ಬಳಿ ಬುಗುರಿಗಿರಗಿರ ದೋಣಿಗಳ ಮೇಲೆ
ಉದ್ಬಾಹು ನಿಗಚುವವನು ಮುಗಿಲ ಫಲಕೆ
ಅಳಿವೆಯಾಚೆಗೆ ಕಪ್ಪು ಕಡಲೇ ? ಅಸಂಬದ್ದ !
ಎಷ್ಟು ಚೆನ್ನಾಗಿದೆಯೋ ಮುಗಿಲ ಬಣ್ಣ !

ಭರತವಾಕ್ಯಕ್ಕು ಬೆದರನೀತ ಧೀರೋದಾತ್ತ ನಾಯಕ
ತೆರೆಬಿದ್ದರೂ ರಂಗಬಿಡದ ಚಿರ ಯುವಕ
ಹೊತ್ತು ಸುತ್ತುತ್ತಾನೆ ಬಲು ಭಾರೀ ಭೂಗೋಳ,
ಗಂಟೆಗೆಭಟ್ತೆಂಟು ಮೈಲಿ ಸ್ವಗತ
ಪ್ರೇಕ್ಷಕರ ಕಣ್ಣಲ್ಲೇ ಬೆವರೊರೆಸಿ, ನರಳಿ , ನಿಟ್ಟುಸಿರ ತಿದಿಯೊತ್ತಿ
ಹೊರೆಹೊಟ್ತು ನಿಂತ ನಸುನಗುವ ಭಂಗಿ !
ಚಪಾಳೆಗೊಂದೊಂದಪೂರ್ವ ತಾನಿನ ವರಸೆ ;
ಈತನಿಂದಲೇ ರಂಗಭೂಮಿ ಭರ್ತಿ ,
ಇಲ್ಲವಾದರೆ ಮರುಕ್ಷಣ ಕಂಪನಿ ದಿವಾಳಿ ;

ಇಲ್ಲ , ಇಲ್ಲ , ನೆಹರೂ ನಿವೃತ್ತರಾಗುವುದಿಲ್ಲ
ಶೇಕಡಾ ಹತ್ತಕ್ಕೆ ಮೋಸವಿಲ್ಲ !

ಕೆಳಗಿನ ವ್ಯಂಗ್ಯ ಚಿತ್ರ ಶಂಕರ್ ಎಂದೇ ಪ್ರಖ್ಯಾತರಾಗಿರುವ ಭಾರತದ ರಾಜಕೀಯ ವ್ಯಂಗ್ಯಚಿತ್ರದ ಜನಕ ಕೆ . ಶಂಕರ್ ಪಿಲ್ಲೈ ಮಾಡಿದ್ದು ನವೆಂಬರ 20 , 1960 .
(ಭಾರತ – ಚೀನಾದ ಗಡಿಯಲ್ಲಿ ಚೀನಾದ ಮೊದಲ ಪ್ರಧಾನಿ Zhou Enlaiಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ದ ಸಂಸ್ಥಾಪಕ Mao Zedongಬಂದು ನಿಂತಿರುವಾಗ ಹೇಗೆ ಪ್ರತಿಕ್ರಿಸಬೇಕೆಂದು ತಿಳಿಯದೆ ಲಾಲ್ ಬಹಾದುರ್ ಶಾಸ್ತ್ರಿ, ಮೊರಾರ್ಜಿ ದೇಸಾಯಿ , ಗೋವಿಂದ್ . ಬಲ್ಲಭ ಪಂತ್ , ಕೃಷ್ಣ ಮೆನನ್ ಮುಂತಾದದವರು ನೋಡುತಿದ್ದರೆ ನೆಹರೂ ಎಸ್ಟು ಬೇಲಿಯ ಕಂಬಿಗಳು ಕಿತ್ತಿವೆ ಎಂದು ಲೆಕ್ಕ ಹಾಕುತಿದ್ದಾರೆ ಎನ್ನುವದನ್ನು ವ್ಯಂಗ್ಯ ಚಿತ್ರ ಹೇಳುತ್ತದೆ )

ಬೆಂಕಿಪಟ್ಣ – ದೃಶ್ಯವಾಗದ ಒಂದು ಸದಾಶಯ !

ಇಂದು ನಗರ ಉಸಿರಾಡಲು ಕಷ್ಟಪಡುತ್ತಿದೆ , ಹಳ್ಳಿ ನಡೆದಾಡಲು ತ್ರಾಣವಿಲ್ಲದೆ ಕಷ್ಟಪಡುತ್ತಿದೆ . ಅನ್ನ ನೀಡುವಾತ ಆತ್ಮಹತ್ಯೆ ಮಾಡಿಕೊಳ್ಳುತಿದ್ದಾನೆ . ಎಲ್ಲರಿಗೂ ಈಗ ಉಳಿಯಲು ಇರುವ ದಾರಿ ಒಂದೇ – ಇಲ್ಲಿ ಸಮಾನತೆಯ ಕನಸನ್ನು ಬೇಕಾಗಿದೆ . ಬಡವ ಬಲ್ಲಿದರ ನಡುವಿನ ಅಂತರ ಕಮ್ಮಿ ಇರಬೇಕು ಎಂಬ ಆಸೆಗೆ ಮತ್ತೆ ನೀರೆರೆಯಬೇಕಾಗಿದೆ . ವಿಕೇಂದ್ರೀಕರಣ, ಎಲ್ಲರಿಗೂ ಉದ್ಯೋಗ , ಸ್ವಾವಲಂಬನೆ ಎಂಬ ಹುದುಗಿ ಹೋಗಿರುವ ಹಳೇ ಮಾತುಗಳನ್ನು ಮತ್ತೆ ಮತ್ತೆ ಹೇಳಬೇಕಾಗಿದೆ ”  ( ಎದೆಗೆ ಬಿದ್ದ ಅಕ್ಷರ – ಸಮಾನತೆಯ ಕನಸು ಕಾಣುತ್ತಾ ) .

ಎದೆಗೆ ಬಿದ್ದ ಅಕ್ಷರದಲ್ಲಿ ದೇವನೂರು ಹೇಳುವ ಈ ಮಾತುಗಳು ಬೆಂಕಿಪಟ್ಣ ಚಿತ್ರದ ಆಶಯವನ್ನು ಹೇಳುತ್ತದೆ .  ಬೆಂಕಿಪಟ್ಣ ಕೇಳಿಸದ ಕೂಗೊಂದಕ್ಕೆ ಧನಿಯಾಗಲು ಹೊರಟ ಸಿನೆಮಾವಾದರೂ ಅನನುಭವಿ ನಿರ್ದೇಶಕನೊಬ್ಬ  ತಾನು ಕಂಡಿರುವ , ತನ್ನನ್ನು ಕಾಡಿರುವ  ಗಂಭೀರ ವಿಚಾರಗಳನ್ನು ದೃಶ್ಯಕ್ಕೆ ಇಳಿಸಲಾಗದೆ ಸೋತಿರುವುದಕ್ಕೆ ಸ್ಪಷ್ಟ ನಿದರ್ಶನ.

ದಯಾ ಬರೆಯುವ ಕಥೆಗಳಂತೆ ಬೆಂಕಿಪಟ್ಣದಲ್ಲಿಯೂ ನಗರ ಕಂಡಿರದ ಹೊಸ ಲೋಕವೊಂದಿದೆ .  ಗ್ರಾಮ್ಯಜೀವನದ ಸೂಕ್ಷ , ಸಂಬಂಧಗಳ ಆಳ , ಜಾಗತೀಕರಣಕ್ಕೆ ಸಿಕ್ಕು ತನ್ನ ಮೂಲ ಚಹರೆಗಳಿಂದ ದೂರ ಸರಿಯುತ್ತಿರುವ ಹಳ್ಳಿಗಳ ಧನಿಯನ್ನು ,  ಕಾಮಿಕ ವರ್ಗದ ಬವಣೆ , ಬದುಕಿನ ತಳಮಳ ,ಸಹಜ ನ್ಯಾಯ ವಂಚಿತ ಸಮಾಜದ ಕೂಗು , ಪೌರ ಕಾರ್ಮಿಕರ ದೂರು ದುಮ್ಮಾನಗಳನ್ನು  ಹೇಳುವ ಪ್ರಯತ್ನ ಚಿತ್ರದಲ್ಲಿ ಕಾಣುತ್ತದೆ . ಆದರೆ ಹಾಳೆಯಲ್ಲಿರುವುದೆಲ್ಲ ದೃಶ್ಯವಾಗಿಲ್ಲ .

benki

ಕೆಟ್ಟ ಚಿತ್ರಗಳಿರುವುದಿಲ್ಲ ಆದರೆ ಕೆಟ್ಟ ಚಿತ್ರಕಥೆಗಳಿರುತ್ತವೆಯಂತೆ . ಈ ಚಿತ್ರವೂ ಹಾಗೆಯೇ . ಸೂತ್ರವಿರದೆ ನೇತಾಡುವಂತಿರುವ ದೃಶ್ಯಗಳನ್ನು ಜೋಡಿಸಿರುವ ಚಿತ್ರಕಥೆ . ಹಿಂದು , ಮುಂದು ಎತ್ತ ಕಡೆ ಬಿದ್ದರೂ ದೃಶ್ಯ ಕೂರಲು ಜಾಗವಿಲ್ಲದೆ ಉಸಿರುಗಟ್ಟಿಸಿದಂತ ಸಂಕಲನ , ಒಂದು ಚಿತ್ರ ತನ್ನ ಮೂಲದಲ್ಲೇ ಎಡವಲು ಇಷ್ಟು ಸಾಲದೆ ? . ಕನ್ನಡಿಗರೇ ಸೇರಿ ಮಾಡಿರುವ , ಕನ್ನಡದ ಕಲಾವಿದರನ್ನೇ ದುಡಿಸಿಕೊಂಡಿರುವ ಹೊಸಬರ ಪ್ರಯತ್ನವಿದು . ಹೊಸ ಹುಡುಗರ ಬೆನ್ನು ತಟ್ಟುವುದು ನಮ್ಮ ಕರ್ತವ್ಯ  ಕೂಡ . ಹಾಗೆಂದ ಮಾತ್ರಕ್ಕೆ ತಪ್ಪುಗಳ ಹೂರಣವೊಂದನ್ನು ಪರವಾ ಇಲ್ಲ ಎಂದು ಹೊಗಳ ಹೊರಟರೆ ಅದು ಕೆಟ್ಟ ಸಂಪ್ರದಾಯವೊಂದನ್ನು ಸೃಷ್ಟಿಸುವ ಅಪಾಯವಿದೆ . ಪ್ರತಿ ಸಿನೆಮಾವೂ ಒಂದೊಂದು ಉನ್ನತಿಯ ಹೆಜ್ಜೆಯಿಡಬೇಕೆಂಬ ಆಶಿಸುವ ನನ್ನಂತವರಿಗೆ ತಪ್ಪುಗಳನ್ನು ಬೊಟ್ಟು ಮಾಡಿ ತೋರಿಸುವ ಅನಿವಾರ್ಯವೂ ಇರುತ್ತದೆ .

ಚಿತ್ರದ ಆರಂಭದಲ್ಲಿ ನಿರ್ದೇಶಕ ಚಿತ್ರದ ಮುಖ್ಯ ಕಥೆಗೆ ಪೀಟಿಕೆಯಾಗಿ ತರುವ ಕಥೆಯ ಯಾವ ಅಗತ್ಯವೂ ಚಿತ್ರಕ್ಕೆ ಬೇಕಿಲ್ಲ . ಇಂದಿನ ಕನ್ನಡ ಪ್ರೇಕ್ಷಕ ಹಿನ್ನಲೆಯಿರದೆ ಕಥೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಎಂಬುದನ್ನು ನಿರ್ದೇಶಕರು ಮರೆತಂತಿದೆ.  ಯಾವಾಗ ನಿರ್ದೇಶಕನೊಬ್ಬ ಕಥೆಯನ್ನು ಪ್ರೇಕ್ಷಕನಿಗೆ ಅವನಾಗೇ ಅರ್ಥಮಾಡಿಕೊಳ್ಳಲು ಬಿಡದೆ ಅರ್ಥ ಮಾಡಿಸುವ ಹಾದಿಗಿಳಿಯುತ್ತಾನೋ ಆಗಲೇ ದೃಶ್ಯವೊಂದು ಅದರ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ . ಹಿನ್ನಲೆ ಸೂಚಿಸುವ ಆ ದೃಶ್ಯಗಳನ್ನು ಯೋಗರಾಜ್ ಭಟ್ಟರ ಧ್ವನಿಯಲ್ಲಿ ವಾಚ್ಯವಾಗಿಸಿರುವುದು ಅನಗತ್ಯ . ವಾಣಿಜ್ಯಾತ್ಮಕ ಉದ್ದೇಶದಿಂದ ಇಂದಿನ ನಿರ್ದೇಶಕರು  ಭಟ್ಟರ .ಧ್ವನಿಗೆ ಜೋತುಬಿದ್ದಿರುವುದು ಕನ್ನಡ ಪ್ರೇಕ್ಷಕನ ದುರ್ದೈವ . ಕಿವಿಗೆ ಆಪ್ತವಾಗದ ದ್ವನಿಯೊಂದು ಹಿನ್ನಲೆಯಲ್ಲಿ ಇದ್ದರೆ ಮುನ್ನಲೆಯನ್ನಿರುವ ಯಾವ ದೃಶ್ಯವೂ ಕಳೆಗಟ್ಟುವುದಿಲ್ಲ .

ಮೊದಲ ಬಾರಿಗೆ ಖಳನಾಯಕನ ಪ್ರವೇಶವಾಗುವವರೆಗೆ ಯಾವ ದೃಶ್ಯವೂ ನೋಡುಗರ ಮನಸಲ್ಲಿ ಅಚ್ಚಾಗಲು ಸಂಕಲನಕಾರ ಬಿಡುವುದಿಲ್ಲ . ದೂರಿ ದೂರಿ ಹಾಡಿನಲ್ಲಿರುವ ದೃಶ್ಯಗಳೂ ಸೇರಿ ಎಲ್ಲವೂ ಒಂದ ಮೇಲೆ ಒಂದನ್ನು ಹೊಯ್ದಂತಿವೆ .  ಪ್ರಥಮಾರ್ಧದಲ್ಲಿ ದೃಶ್ಯಗಳು ಒಂದಕ್ಕೊಂದು ಸಂಭದವಿರದೆ ಎಲ್ಲೆಲ್ಲಿಂದಲೋ ಹಾರಿಕೊಂಡು  ಬರುತ್ತವೆ . ತೀರಾ ಮುಗ್ಡನಾದ ನಾಯಕನಿಗೆ ಇನ್ನೂ ಪ್ರೀತಿ ಏನೆಂದು ತಿಳಿಯದಿರುವ ಹೊತ್ತಿಗೇ ನಾಯಕಿಗೋಸ್ಕರ ನಾಯಕ ಮರದಿಂದ ಹಕ್ಕಿಗಳನ್ನು ಹಾರಿಸುವ ದೃಶ್ಯ , ಆಗಾಗ ಉದ್ಭವವಾಗುವ ಕೋಡಂಗಿಯಂತ ಹಾಸ್ಯ ಪಾತ್ರಧಾರಿ , ಒಮ್ಮಿಂದೊಮ್ಮೆಲೇ ಎದ್ದು ಬರುವ ಖಳನಾಯಕ ಹೀಗೆ . ಇಂತಹ ತಲೆಬುಡವಿಲ್ಲದ ಚಿತ್ರಕಥೆ ಮತ್ತು ಸಂಕಲನದ ಜುಗಲ್ಭಂದಿಯಿಂದ ಮೊದಲಾರ್ಧ ಮುಗಿಯುವ ವೇಳೆಗೆ ತನ್ನ ಬಹುತೇಕ ನೋಡುಗರನ್ನು ಬೆಂಕಿಪಟ್ಣ ತನ್ನಿಂದ ದೂರಮಾಡಿಕೊಂಡಿರುತ್ತದೆ .

ತಕ್ಕಮಟ್ಟಿಗೆ ನಾಯಕ ನಾಯಕಿಯನ್ನು ಹೊರತುಪಡಿಸಿ ಯಾವ ಪಾತ್ರವನ್ನೂ ನಿರ್ದೇಶಕ ಸರಿಯಾಗಿ ಪೋಷಿಸಿಲ್ಲ . ಚಿತ್ರದ ಆರಂಭಿಕ ದೃಶ್ಯಗಳಲ್ಲಿ ನಾಯಕ ಯಾವುದೋ ವೇಷ ಹಾಕಿಕೊಂಡು ಬರುವಾಗ , ಪಟ್ಟಣದಲ್ಲಿ  ಇಲಿ ಪಾಷಾಯಾನ ಮಾರುವಾಗ ಎದುರೆದುರು ಸಿಕ್ಕಿದಾಗ ಆಪ್ತವಾಗಿರದ ನಾಯಕ ನಾಯಕಿಯ ಪಾತ್ರಗಳು ಮುಂದಿನ ಕೆಲವೇ ಸಮಯಗಳಲ್ಲಿ ಮನೆಯವರೆಲ್ಲರ ಜೊತೆ ಸೇರಿ ಹಾಡೊಂದಕ್ಕೆ ಕುಣಿಯುತ್ತವೆ .  ಇಲಿ ಪಾಷಾಣ ತಯಾರಿಸಿ ಮಾರುವ ತಲ್ಪುರ್ಕಿ, ನಾಯಿ ಹಿಡಿಯುವ ಬಾಬುಲಿಯಂತ ಹೊಸ ತರದ ಪಾತ್ರ ಸೃಷ್ಟಿಸಿದ ಕತೆಗಾರ ಯಾವೊಂದು ಪಾತ್ರದ ಬೆಳವಣಿಗೆಗೆ ಅವಕಾಶ ನೀಡದೆ ಅರ್ಧರ್ಧಕ್ಕೆ ಕೊಲ್ಲುತ್ತಾನೆ . ಕಥೆಗೆ ತುರುಕಿಸಿರುವ ಹಾಸ್ಯ ದೃಶ್ಯಗಳು ತೀರಾ ಪೇಲವ . ಪ್ರಯತ್ನಿಸಿದರೂ ನಗು ಬಾರದು .

ಯಾವುದೇ ಚಿತ್ರವೂ ಸಹಜತೆಯಿಂದ ದೂರ ನಿಲ್ಲಬಾರದು . ಉದಾಹರಣೆಗೆ ನಾಯಿ ಹಿಡಿಯುವ ದೃಶ್ಯಗಳನ್ನೇ ತೆಗೆದುಕೊಳ್ಳಿ . ಹಳ್ಳಿಯ ಬೀದಿಗಳಲ್ಲಿ ಹುಚ್ಚೆದ್ದು ಕುಣಿಯುವ ಬೀದಿನಾಯಿಗಳನ್ನು ಹಿಡಿಯುವ ದೃಶ್ಯದಲ್ಲಿ ಪಳಗಿದ ಜರ್ಮನ್ ಶೆಫರ್ಡ್ ನಾಯಿಯನ್ನು ತೋರಿಸಿದರೆ ಹೇಗೆ ? .  ನಾಯಿಹಿಡಿಯುವ ಮೊದಲು ಮೈಗೆ ಎಣ್ಣೆ ಹಾಕುವ ದೃಶ್ಯಗಳನ್ನು ನೋಡಿ . ಎಲ್ಲೋ ಇರುವ ಜನಸಂದಣಿಯ ಪ್ರದೇಶಗಳಲ್ಲಿ ನಾಯಿ ಹಿಡಿಯುವುದಕ್ಕೆ ಕ್ಯಾಮರಾಕ್ಕೆ ಚಂದ ಕಾಣುವ ಯಾವುದೊ ಪ್ರಪಾತವೊಂದರಲ್ಲಿ ಮೈಗೆ ಎಣ್ಣೆ ಹಾಕಿಕೊಳ್ಳುವುದು ಮೂರ್ಖತನವಲ್ಲದೆ ಮತ್ತೇನೂ ಅಲ್ಲ .

ಬೊಗಸೆಯಲ್ಲಿ ಮಳೆ ಹಾಡೊಂದು ವಿಚಿತ್ರ . ಮಲೆನಾಡಿನ  ಹಳ್ಳಿಯ ಮನಸೊಂದು ತನ್ನ ಪ್ರೇಮದ ವಿವರಣೆ ಕೊಡಲು ಆಯ್ದುಕೊಳ್ಳುವುದು ಕಡಲು ಮತ್ತು ಜಗಮಗಿಸುವ ಉಡುಪುಗಳನ್ನ . ಹಳ್ಳಿಯೊಳಗೆ ಒಂದು ಸ್ವರ್ಗವಿದೆ ಅಲ್ಲವೇ ? . ಕೂ.. ಎಂದರೆ ಎಲ್ಲ ದಿಕ್ಕುಗಳಿಗೂ ಧ್ವನಿ  ಪ್ರತಿಧ್ವನಿಸುವ ಗಿರಿ ಕಂದಕಗಳಿವೆ . ಕಡಲ  ತೆರೆಯ ಸಪ್ಪಳಕ್ಕಿಂತ ಮೆಲುಧನಿಯಲ್ಲಿ  ಜುಳು ಜುಳು ಎಂದು ಪ್ರೀತಿ ಸಾರುವ ತೊರೆಗಳಿವೆ . ಆಡುವ ನವಿಲಿದೆ , ಬೆಳಗನ್ನು ಎದುರುಗೊಳ್ಳುವ ಕೋಳಿಯಿದೆ , ರಸ್ತೆ ತುಂಬುವ ಕುರಿ ಹಿಂಡಿದೆ . ಇದೆಲ್ಲವೂ ಅಲ್ಲಿನ ಸಹಜ ಪ್ರಕೃತಿ . ಒಂದು ಪರಿಸರದ ಪ್ರೀತಿಯನ್ನು ಅಲ್ಲಿನ ಭಾಷೆಯಲ್ಲಿ ಕಟ್ಟಿಕೊಟ್ಟರಷ್ಟೇ ಅದಕ್ಕೊಂದು ಅರ್ಥ  .  ಮಳೆಯನ್ನೇ ತೋರಿಸದೆ ಕೈಯಲ್ಲಿ ನೀರು ಹಾರಿಸಿ  “ಬೊಗಸೆಯಲ್ಲಿ ಮಳೆ ಹಿಡಿದಂತೆ” ಎಂದು ಹೇಳುವುದು , ” ಎಂಟಾಣೆ ನಾಣ್ಯಾನೇ ಚಂದ್ರಾಮ ” ಎನ್ನುವಲ್ಲಿ ನಾಣ್ಯವನ್ನು ಹಾರಿಸುವುದೆಲ್ಲ ಅತಿರೇಕ . ದೃಶ್ಯವೊಂದನ್ನು ಅಷ್ಟೊಂದು ಸೂಚ್ಯವಾಗಿಸುವುದು ಬೇಕಿಲ್ಲ . “ಎರಡು ಜಡೆಯನ್ನು ಹಿಡಿದು ಕೇಳುವೆನು ” ಹಾಡನ್ನು ನೋಡಿ . ಅಲ್ಲಿ ನಾಯಕ ನಾಯಕಿಯ ಜಡೆಯನ್ನು ಎಲ್ಲಿಯೂ ಹಿಡಿಯುವುದಿಲ್ಲ . ಇನ್‌ಫ್ಯಾಕ್ಟ್ ಅಲ್ಲಿ ನಾಯಕಿಗೆ ಜಡೆಯೇ ಇಲ್ಲ . ಆದರೂ ಆ ಹಾಡು ಹೇಳಬೇಕಾದದ್ದನ್ನು ದಾಟಿಸುತ್ತದೆ . ದೃಶ್ಯ ಭಾಷೆಗೆ ವಿಷವೊಂದನ್ನು ಸೂಚ್ಯವಾಗಿಸದೆ ನೋಡುಗನಿಗೆ ದಾಟಿಸುವ ತಾಕತ್ತಿದೆ . ಅದನ್ನು ನಿರ್ದೇಶಕ ಗುರುತಿಸುವುದು ಮುಖ್ಯ .

ನೀರಿನ ಬಳಕೆಯೊಂದಿಗೆ ಸಂಯೋಜಿಸಿದ ಸಾಹಸ ದೃಶ್ಯವೊಂದು ನೋಡಲು ಚೆಂದವಿದೆ . ಸ್ಟೀವ್ ಕೌಶಿಕ್ ಸಂಗೀತದ ಘಮ ಎರಡು ಹಾಡಿಗಸ್ಟೆ ಸೀಮಿತ .  ನಿರಂಜನ  ಬಾಬು ಕ್ಯಾಮರಾ ಮೇಲೊಮ್ಮೆ , ಕೆಳಗೊಮ್ಮೆ , ವೈಡ್ , ಜ಼ೂಮ್ ಇನ್ , ಜ಼ೂಮ್ ಔಟ್ ಮಾಡುವುದಲ್ಲೇ ನಿರತರಾಗಿರುವುದರಿಂದ ದೃಶ್ಯವೊಂದಕ್ಕೆ ಅಗತ್ಯವಾಗಿರುವ ವಿವರಗಳನ್ನ ತನ್ನಲ್ಲಿ ಹಿಡಿದಿಡುವುದೇ ಇಲ್ಲ .

ಜಾಗತಿಕ ಸಿನೆಮಾಗಳನ್ನು ಕನ್ನಡದ ಓದುಗರಿಗೆ ಪರಿಚಯಿಸಿಕೊಂಡು ಬಂದಿರುವ ದಯಾನಂದ್ ನಿರ್ದೇಶದ ಚಿತ್ರಕ್ಕೆ ಸಹಜ ನಿರೀಕ್ಷೆಗಳಿರುತ್ತವೆ .  ನಮ್ಮೊಂದಿಗಿರುವ ಉತ್ತಮ ಬರಹಗಾರರಲ್ಲಿ ಒಬ್ಬರಾಗಿರುವ ದಯಾನಂದ್ ದೃಶ್ಯಕಟ್ಟುವ ಕಲೆಯನ್ನು ಕಲಿಯುವುದು ಸಾಕಷ್ಟಿದೆ . ಒಳ್ಳೆಯ ಸಂದೇಶವಿರುವ , ತುಳಿತಕ್ಕೊಳಗಾದ ಸಮಾಜದ ದ್ವನಿಯಾಗ ಬಯಸಿದ ಚಿತ್ರಗಳೆಲ್ಲ ಒಳ್ಳೆಯ ಸಿನಿಮಾಗಳಾಗುವುದಿಲ್ಲ . ಸಿನೆಮಾಕ್ಕೆ ಅದರದ್ದೇ ಆದ ಒಂದು ಭಾಷೆಯಿದೆ. ಸಿನೆಮಾ ಒಂದಕ್ಕಿರುವ ಮಾನದಂಡಗಳಾಚೆ ನಿಂತು ನೋಡಿದರೆ ಒಳ್ಳೆಯದು ಕಾಣಿಸುತ್ತವಯೇ ಹೊರತು , ಒಂದು  ಸಿನೆಮಾವಾಗಿ  ಬೆಂಕಿಪಟ್ನ  ಕೆಟ್ಟ ಅನುಭವ .

ನಮ್ಮ ಇಂದಿನ ತುರ್ತು ಕನ್ನಡ ಚಿತ್ರಗಳಿಂದ ದೂರ ಉಳಿದಿರುವ ಪ್ರೇಕ್ಷಕವರ್ಗಗಳನ್ನು ನಮ್ಮ ಚಿತ್ರಗಳೆಡೆಗೆ ಬರಿಸಿಕೊಳ್ಳುವುದು . ಕಾಸರವಳ್ಳಿಯಂತ ಹಿರಿಯ ನಿರ್ದೇಶಕರ ಚಿತ್ರಗಳನ್ನು ಇಂದಿನ ಹೊಸ ಪ್ರೇಕ್ಷಕ ವರ್ಗಕ್ಕೆ ತಲುಪಿಸಿವ ಕೆಲಸಗಳಾಗುವ ಯಾವುದೇ ಕುರುಹುಗಳೂ ಕಾಣದೆ ಇರುವ ಸಂಧರ್ಭದಲ್ಲಿ , ತರುಣರ ಹೊಸ ನೀರಿನ ಅಪಾರ ಭರವಸೆ ಹುಟ್ಟುಹಾಕಿರುವ ಚಿತ್ರಗಳಿದ್ದೂ , ಹೊಸ ಪೀಳಿಗೆಯನ್ನು ಬೆಂಬಲಿಸುವ ಜವಾಬ್ದಾರಿ ಮರೆತು ಸ್ವಹಿತಾಸಕ್ತಿಯ ರಾಜಕೀಯದ ಮೇಲಾಟದಲ್ಲಿ  ರಾಜ್ಯ ಪ್ರಶಸ್ತಿ , ಸರ್ಕಾರಿ ಪ್ರಾಯೋಜಿತ ಚಿತ್ರೋತ್ಸವಗಳ ಪ್ರಶಸ್ತಿ ದಕ್ಕಿಸಿಕೊಳ್ಳುವ  ಅದೇ ಹಳೇ ನೀರಿನ ಚಿತ್ರಗಳ ನಡುವೆ  ಗೆಳೆಯ ದಯಾನಂದರಂತ  ಪ್ರತಿಭಾವಂತ ನಿರ್ದೇಶಕರು ಪ್ರಬಲ ಚಿತ್ರಗಳೊಡನೆ  ಮತ್ತೊಮ್ಮೆ ಪುಟಿದೆದ್ದು ಬರುವುದನ್ನು ನಾನು ಎದುರುನೋಡುತ್ತೇನೆ .

 

Mythri – Review

11001895_459714660849009_7199656060726202411_n

“Mythri” is definitely one time watchable . Apart from first half an hour of the film n fact that its screen play is written to convince a “STAR” which is much needed for a commercial push , Giriraj BM holds things tight till da end . It’s not just a kids cinema and many posters prove it when it didn’t give much needed space for the kid who plays main character in da film . Giriraj has learnt his lessons right in marketing post Jatta . One might argue that this script resembles slum dog millionaire when it comes to game show . Agree that Giriraj could have chosen a diff game but a quiz show helps him to show the intelligence in children and also it is easy for a director to connect with the audience when each person in audience try to crack the answer fa the question. Ilayaraja hs given 2 good songs but falls short in bgm . Now dat mythri has got opening which every “STAR” cinema gets , hope to see more n more families specially with kids watching Mythri in coming days.

ನಾನಾರೆಂಬುದು ನಾನಲ್ಲ ! ನೀಯೆಣಿಸುವ ಗುಣ ನಾನಲ್ಲ !

ಮನುಷ್ಯ ಜೀವನದ ವಿವಿಧ ಹಂತಗಳನ್ನು ವಿವರಿಸುವ ಜಾಗತಿಕ ಶ್ರೇಷ್ಟ ಸಿನೆಮಾಗಳ ಕಥೆಗಳ ಎಳೆಯಂತಿರುವ , ಮೈನ್ ಸ್ಟ್ರೀಮ್ ಕನ್ನಡ ಸಿನೆಮಾಗಳಿಗೆ ಅಪುರೂಪ ಎನ್ನಬಹುದಾದ ಉತ್ತಮ ಪ್ರಯತ್ನವೊಂದು ಬಹುಪರಾಕ್‌ನಲ್ಲಿ ಆಗಿದೆ .

ಸಿಂಪಲ್ ಆಗಿ ಒಂದು ಲವ್ ಸ್ಟೋರಿಯ ನಂತರ ಗೆದ್ದೆತ್ತಿನ ಬಾಲ ಹಿಡಿಯದೆ ಸುನಿ ಸವಾಲಿನ ಕತೆಯೊಂದನ್ನು ಆಯ್ಕೆ ಮಾಡಿಕೊಂಡಿಕೊಂಡಿದ್ದಾರೆ .ಬದುಕಿನ ವೈಪರೀತ್ಯಗಳನ್ನು ಮೂರು ಹಂತಗಳನ್ನಾಗಿಸಿ , ಅದನ್ನು ಮೂರು ಕಥೆಗಳ ಸಮಾನಾಂತರ ನಿರೂಪಣೆಯಲ್ಲಿ ಹೇಳುತ್ತಾನೆ ನಿರ್ದೇಶಕ . ಸಂತ ಶಿಶುನಾಳ ಶರೀಫರ “ನಾನಾರೆಂಬುದು ನಾನಲ್ಲ ” ರಚನೆಯಂತೆ ಮಾನವನೊಬ್ಬ ತನ್ನೊಳಗನ್ನು , ತಾನು ನಡೆದು ಬಂದ ಹೆಜ್ಜೆಗುರುತುಗಳನ್ನು ಮೆಲುಕು ಹಾಕಿಕೊಳ್ಳುತ್ತಾನೆ . ಕೊನೆಯಲ್ಲಿ ಪರಿಸ್ತಿತಿಯ ಕೈಗೊಂಬೆಯಾಗಿ , ಖಿನ್ನತೆಯಿಂದ ಎಲ್ಲವನ್ನೂ ಬಿಟ್ಟು ಬೇರೆಡೆಗೆ ಮುಖ ಮಾಡುತ್ತಾನೆ . ನಾಯಕನ ಜೀವನವನ್ನು ಯವ್ವನದಲ್ಲಿ ಕಾಲೇಜು ಹುಡುಗ ಮನಸ್ , ಮಧ್ಯ ವಯಸ್ಸಿನಲ್ಲಿ ಭೂಗತ ಜಗತ್ತಿನ ಡಾನ್ ಮಣಿ , ಕೊನೆಯ ದಿನಗಳಲ್ಲಿ ರಾಜಕಾರಣಿ ಮೌನಿ ಯಾಗಿ ಚಿತ್ರಿಸಲಾಗಿದೆ . ಅಂತ್ಯವನ್ನು ಕಾತರದಿಂದ ಕಾಯುವ ಪ್ರೇಕ್ಷಕನಿಗೆ ನಾಯಕನ ಜೀವನ “ನೀಯೆಣಿಸುವ ಗುಣ ನಾನಲ್ಲ” ಎಂದು ಕೊನೆಯಲ್ಲಿ ತಿಳಿಯುತ್ತದೆ .

ಬಹುಪರಾಕ್‌ ನ್ನು ಉತ್ತಮ ಚಿತ್ರವಾಗಿಸುವುದು ಅದರ ಕಥೆ, ಸಂಭಾಷಣೆ ಮತ್ತು ಪಾತ್ರಗಳ ಪೋಷಣೆ . ಮನಸ್ ನ ಯವ್ವನದ ಸಂಭಾಷಣೆಯಲ್ಲಿ ಎಸ್ಟು ವಾಚಾಳಿ , ಹುಚ್ಚುತನವಿದೆಯೊ , ಅಷ್ಟೇ ಗಡಸನ್ನು , ಪ್ರಜ್ಞಾವಂತಿಕೆಯನ್ನು ಮೌನಿಯಲ್ಲಿ ತುಂಬಿದ್ದಾರೆ . ” ಎಲ್ಲರೂ ಬಲೂನ್ ಹೊರಗಿನ ಗಾಳಿಯಿಂದ ಮೇಲೆ ಹೋಗುವುದು ಎಂದು ಕೊಳ್ಳುತ್ತಾರೆ . ಆದ್ರೆ ನಿಜಮಾಗಿ ಅದು ಅದರೊಳಗಿನ ಗಾಳಿಯಿಂದ ” ಇಂಥ ಹಲವಾರು ಗಾಂಭೀರ್ಯ ಭರಿತ , ನಿಮ್ಮನ್ನು ಯೋಚಿಸುವಂತೆ ಮಾಡುವ ಸಂಭಾಷಣೆಗಳಿವೆ ಚಿತ್ರದಲ್ಲಿ . ಪ್ರತಿಯೊಂದು ಪಾತ್ರದ ಬೆಳವಣಿಗೆಯ ಕೆಲಸ ಅಚ್ಚುಕಟ್ಟಾಗಿದೆ . ಯಾವುದೇ ಪಾತ್ರ ಅಪೂರ್ಣವೆನಿಸಿ ಕೊನೆಗೊಳ್ಳುವುದಿಲ್ಲ . ಎಲ್ಲಕ್ಕೂ ಅದರದ್ದೇ ಆದ ಅವಕಾಶಗಳಿವೆ . ಪಾತ್ರವರ್ಗವೂ ಅದನ್ನು ಚೆನ್ನಾಗಿ ನಿರ್ವಹಿಸಿದೆ . ಕಾಲೇಜು ಹುಡುಗನಾಗಿ ಕಿಟ್ಟಿಯನ್ನು ನೋಡುವುದು ಕಷ್ಟ . ಮೌನಿಯಾಗಿ ಅವರಲ್ಲಿನ ಮಾಗಿದ ನಟನೊಬ್ಬ ಕಾಣುತ್ತಾನೆ . ನಿರ್ದೇಶಕ 3 ಹಂತದ ಕಥೆಗೆ ಒಬ್ಬನೇ ನಾಯಕನ ಬದಲಾಗಿ ಆಯಾ ವಯಸ್ಸಿನ ಪಾತ್ರಧಾರಿಗಳನ್ನು ಬಳಸಿ , ಕಥೆಯ ತಿರುಳನ್ನು ಚಿತ್ರದಲ್ಲಿ ಬಳಕೆಯಾದ ನಾಟಕದ ನಿರೂಪಕನಿಂದ ಹೇಳಿಸಿದ್ದರೆ ಚಿತ್ರ ನಾಯಕ ಪಾತ್ರದ ದೃಸ್ಟಿಯಿಂದ ಚಿತ್ರ ಇನ್ನಸ್ಟು ಸಧ್ರಡಗೊಳ್ಳುತಿತ್ತು . ಸಂಗೀತ ನಿರ್ದೇಶಕ ಭರತ್ ಬಿ ಜೆ ಗಮನಸೆಳೆಯುತ್ತಾರೆ . 3 ಬೇರೆ ಬೇರೆ ಶೇಡ್ ನ ಕಥೆಗಳು ಸಮಾನಾಂತರವಾಗಿ ಚಲಿಸಿದರೂ ಹಿನ್ನಲೆ ಸಂಗೀತ ಒಂದರಿಂದ ಮತ್ತೊಂದು ಕಥೆಗೆ ಸರಾಗವಾಗಿ ವರ್ಗಾವಣೆಗೊಳ್ಳುತ್ತದೆ .

1058836_10204167603292044_214285225_n

ಚಿತ್ರದಲ್ಲಿ ಬಣ್ಣಗಳ ಬಳಕೆಗೆ ಗಮನ ಕೊಟ್ಟಿರುವುದು, ಯವ್ವನದಲ್ಲಿನ ಸ್ನೇಹ , ಪ್ರೀತಿಗಳ ನಡುವಿನ ಜಂಜಾಟವನ್ನು ಬಿಳಿ ಮತ್ತು ಕೆಂಪು ಬಣ್ಣಗಳಿಂದ ತೋರಿಸಲಾಗಿದೆ . ಆದರೆ ಬಣ್ಣಗಳ ಬಳಕೆಯನ್ನು ಬಣ್ಣಗಳಿಂದಲೇ ವ್ಯಕ್ತ ವಾಗಲು ಬಿಡದೆ ಅದನ್ನು ತೀರಾ ವಾಚ್ಯವಾಗಿಸಿದ್ದಾರೆ ನಿರ್ದೇಶಕ . ಕೆಂಪು ಬಣ್ಣದಲ್ಲಿರುವ ವಿವಿದ ಪ್ರಕಾರಗಳೆಡೆ ಗಮನ ಕೊಡದೆ ಒಂದೇ ಕಡು ಕೆಂಪು ಬಣ್ಣದಿಂದ ತುಂಬಿಸಲಾಗಿದೆ ಹಾಗಾಗಿ ಬಣ್ಣಬಳಕೆ ಸಹಜತೆ ಇಲ್ಲದೆ ಸೊರಗುತ್ತದೆ . ಎಲ್ಲೆಲ್ಲಿ ಪಾತ್ರಗಳಲ್ಲಿ ಸ್ನೇಹ , ಪ್ರೀತಿಯ ನಡುವೆ ದ್ವಂದ್ವವಿದೆಯೊ ಅಲ್ಲಲ್ಲಿ ಕೆಂಪು , ಮತ್ತು ಬಿಳಿ ಎರಡೂ ಬಣ್ಣಗಳಿರುವ ಉಡುಪನ್ನು ಬಳಸಲಾಗಿದೆ . ದೇವಸ್ತಾನಕ್ಕೆ ಸ್ನೇಹ ಬರುವಾಗ ಅವಳು ಉಟ್ಟ ಬಿಳಿ ಸೀರಿಗೆ ಕೆಂಪು ಪಟ್ಟಿಯಿದೆ . ಉಸಿರಾಗುವೆ ಹಾಡಿನಲ್ಲಿ ನಾಯಕನಿಗೆ ಸ್ನೇಹನ ಮೇಲಿರುವುದು ಕೇವಲ ಸ್ನೇಹವಷ್ಟೆ ಅನ್ನುವುದನ್ನು ಹೇಳಲು ಕೆಂಪು ಜ್ಯಾಕೆಟ್ ಹಾಕಿಕೊಂಡು ಬಂದ ನಾಯಕ ಜಾಕೆಟ್ ತೆಗೆದಿಟ್ಟು ಒಳಗಿದ್ದ ಬಿಳಿಯುಡುಗೆಯಲ್ಲಷ್ಟೆ ಬರುತ್ತಾನೆ ಎಂದು ತೋರಿಸುವುದರಲ್ಲಿ ಜಾಣ್ಮೆಯಿದೆ . ಚೆಸ್ ಮಣೆಯ ಕಾಯಿಗಳು ಕಪ್ಪು ಬಿಳುಪಿನಲ್ಲಿರದೆ ಕಪ್ಪು ಮತ್ತು ಕೆಂಪಿನಲ್ಲಿದೆ . ಅಲ್ಲಲ್ಲಿ ಬಳಸುವ ಬಣ್ಣಗಳ ಬಳಕೆ ಕೆಲವೊಮ್ಮೆ ವಿಪರೀತಕ್ಕೆ ಹೋಗುತ್ತದೆ . ತೆರೆಯನ್ನು ಬಣ್ಣಗಳಿಂದ ತುಂಬಿಸುವ ಅದಮ್ಯ ಬಯಕೆ ಕೆಲವೊಮ್ಮೆ ಸಹಜತೆಯನ್ನು ಮರೆಮಾಚುತ್ತದೆ . ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಕಂಬ , ನೆಟ್ ಎಲ್ಲವೂ ಕೆಂಪಾಗಿರುವುದು ಅಸಹಜ . ಸ್ನೇಹಕ್ಕೆ ಬಳಕೆಯಾದ ಬಿಳಿ ನಾಯಕ ನಾಯಕಿಗೆ ಮಾತ್ರವೇ ಆಗಿ ಉಳಿಯುತ್ತದೆ . ನಾಯಕನ ಅಪ್ಪಟ ಸ್ನೇಹಿತನ ಬೈಕ್ , ಬಟ್ಟೆ ಎಲ್ಲ ಕಪ್ಪು ಎಂಬುದು ವಿಚಿತ್ರ . ನಾಯಕ ಸ್ನೇಹಳೊಂದಿಗೆ ಡೈನಿಂಗ್ ಟೇಬಲ್ನಲ್ಲಿ ಮಾತನಾಡುವಾಗ ಕರೆಮಾಡುವ ಪ್ರೀತಿಯ ಚಿತ್ರ ಮೊಬೈಲ್ ನಲ್ಲಿ ತೋರಿಸುವಾಗ ಕೆಂಪಿನ ಬದಲಾಗಿ ಬಿಳಿ ಬಟ್ಟೆಯಿದೆ . ಯವ್ವನದಲ್ಲಿ ಬಣ್ಣದ ಬಳಕೆಗೆ ಕೊಟ್ಟ ಪ್ರಾಮುಖ್ಯತೆಯನ್ನು ಉಳಿದೆಡೆ ನೀಡಿಲ್ಲ . ಮೌನಿಯ ಉಗ್ರತೆಗೆ ಬಳಕೆಯಾದ ಕೇಸರಿ ಕೇವಲ ಬಾವುಟಗಳಿಗಸ್ಟೆ ಸೀಮಿತ .

ಆರಂಭದಲ್ಲಿ ಕುತೂಹಲ ಹುಟ್ಟಿಸುವ , ಅಂತ್ಯದಲ್ಲಿ ಬಿಡದೆ ಕಾಡುವ ಚಿತ್ರಕಥೆ ಮಧ್ಯಬಾಗದಲ್ಲಿ ಹಿಡಿತವಲ್ಲದೆ ಸೊರಗಿದೆ . ಚಿತ್ರದ ಕೊನೆಯಲ್ಲಿ ಮೂರು ಕಥೆಗಳನ್ನು ಒಂದೆಡೆ ತರಲು ನಿರ್ದೇಶಕ ಹೆಣಗಾಡುತ್ತಾನೆ . ಮಣಿ ಮೌನಿಯಾಗಿ ಪರಿವರ್ತನೆಯಾಗುವುದನ್ನು ತೋರಿಸಿ , ಮನಸ್ ಮಣಿಯಾಗುವುದನ್ನು ಹೇಳದೆ ಉಳಿಸುತ್ತಾನೆ . ಹಾಗಾಗಿ ಕಥೆಯ ಅಗತ್ಯ ಕೊಂಡಿಯೊಂದು ತಪ್ಪಿ ಹೋಗುತ್ತದೆ . ಕಥೆಯ ಹಿಮ್ಮುಖ ಚಲನೆಗೆ ಕೊಟ್ಟ ಕಾಲಾವಕಾಶ ( screen presence ) ಒಂದೆರಡು ನಿಮಿಷಗಳಷ್ಟೆ ಆಗಿರುವುದರಿಂದ ಅದು ಆಸ್ಪಷ್ಟತೆಯೊಂದಿಗೆ ಕೊನೆಗೊಳ್ಳುತ್ತದೆ . ಮೌನಿಯ ವಿದೇಶಿ ಚಪ್ಪಲಿಯನ್ನು ತಂದು ಕೊಟ್ಟಾಗ ಮಗಳು ಅದು ತನಗೆ ಬೇಡವೆಂದು ತನ್ನಿಷ್ಟದಂತೆ ಕನಸು ಕಾಣಲು ಬಿಡಬೇಕೆಂದು ತಂದೆಯಲ್ಲಿ ಮನವಿ ಮಾಡುತ್ತಾಳೆ . ಆದರೆ ಮುಂದೆ ಎರಡು ಮೂರು ದೃಶ್ಯಗಳ ಅಂತರದಲ್ಲಿ ಯಾವುದೇ ಪೂರ್ವ ಪೀಟಿಕೆಯ ದೃಶ್ಯಗಳಿಲ್ಲದೆ ಆಕೆ ತಂದೆಯ ಆಸೆಯಂತೆ ಬದಲಾಗುತ್ತಾಳೆ . ಮೌನಿಯ ಮನಪರಿವರ್ತನೆಗೆ ಸನ್ಯಾಸಿಯೊಬ್ಬನಿಂದ ಪ್ರವಚನ ಮಾಡಬೇಕಾದ ಯಾವುದೇ ಅಗತ್ಯವಿಲ್ಲ . ಯಾಕೆಂದರೆ ಮೌನಿಯ ಜೀವನದಲ್ಲಾದ ಏರಿಳಿತಗಳು ಮತ್ತು ತನ್ನೊಂದಿಗಿರುವ ಕೆಲಸಗಾರರ ಮಾತುಗಳಷ್ಟೇ ಸಾಕು ಪ್ರಜ್ಞಾವಂತನನ್ನು ಬದಲಾಯಿಸಲು . ಹಾಗಾಗಿ ಸನ್ಯಾಸಿ ಮತ್ತು ವೇಶ್ಯೆಯ ಪಾತ್ರಗಳ ಬಳಕೆ ತೆರೆಯ ಸಮಯವನ್ನು ಆಕ್ರಮಿಸುತ್ತದೆಯೇ ಹೊರತು ಇಡೀ ಚಿತ್ರಕ್ಕೆ ಏನನ್ನು ಸೇರಿಸುವುದಿಲ್ಲ .

ಛಾಯಾಗ್ರಾಹಕ ಕೆಲವು ಉತ್ತಮ ಶಾಟ್ಗಳನ್ನು ಕಟ್ಟಿಕೊಟ್ಟರು ಕೆಲವೊಮ್ಮೆ ತೀರಾ ಸೋಮಾರಿಯೆನಿಸುತ್ತಾರೆ . ಅಲ್ಲಲ್ಲಿ ಹಲವೆಡೆ ಫ್ರೇಮ್ನಲ್ಲಿ ಅಗತ್ಯವಿಲ್ಲದ ವಸ್ತುಗಳು ಹಾಗೆಯೇ ಉಳಿಯುತ್ತವೆ . ಅಲ್ಲಲ್ಲಿ ಅಗತ್ಯವಿರದೆ ವೈಡ್ ಆಂಗಲ್ ಶಾಟ್ ಗಳು ಬಳಕೆಯಾಗಿವೆ . ಮನೆಯ ಹೊರಾಂಗಣದಲ್ಲಿ ನಡೆಯುವ ಸಭೆಯ ದೃಶ್ಯವನ್ನು ತೋರಿಸಲು ಮನೆಯ ಒಂದು ತುದಿಯ ಮೇಲಿಂದ ಕಾಮೆರಾ ಚಲಿಸಬೇಕಾದ ಅಗತ್ಯವಿರುವುದಿಲ್ಲ ಅಲ್ಲವೇ ?. ಉತ್ತರ ಕರ್ನಾಟಕ ಭಾಗದ ಚಿತ್ರೀಕರಣ ನೋಡಲು ಅದ್ಬುತ . ಕೋಟೆಯಂತಿರುವ ಮನೆಯ ಮೂಲದ್ವಾರದ ಸೊಬಗು , ಮಣ್ಣಿನ ಬಣ್ಣ , ಮಾತನಾಡಲು ನಿಂತಂತಿರುವ ಬ್ರಹತ್ ಕಲ್ಲುಗಳನ್ನು ಹಾಗೆಯೇ ನಿಮ್ಮೆದುರು ತಂದು ನಿಲ್ಲಿಸುತ್ತಾನೆ ಛಾಯಾಗ್ರಾಹಕ . ಉತ್ತಮವಾಗಿದ್ದ ಐಟಮ್ ಸಾಂಗ್ ಒಂದು ಕಲಾನಿರ್ದೇಶನ ಮತ್ತು ಛಾಯಾಗ್ರಹಣದ ಹುಳುಕಿನಿಂದ ತೀರಾ ಸಾಧಾರಣವೆನಿಸುತ್ತದೆ .

ಉಳಿದವರು ಕಂಡಂತೆಯಲ್ಲಿ ನಿರ್ದೇಶಕ ರಕ್ಷಿತನಷ್ಟೆ ಭರವಸೆ ಮೂಡಿಸಿದ್ದ , ಈಗಿರುವ ಕನ್ನಡದ ಕೆಲವೇ ಆತುತ್ತಮ ಸಂಕಲನಕಾರರಲ್ಲಿ ಒಬ್ಬರೆಂದು ಗುರುತಿಸಬಹುದಾದ ಸಚಿನ್ ಕೆಲಸ ಮೌನಿಯ ಕಥೆಯಲ್ಲಿ ಮಾತ್ರ ಇಷ್ಟವಾಗುವುದು . ಮನಸ್ ನ ಕತೆಯುದ್ದಕ್ಕೂ ಬಳಕೆಯಾದ ವಿಪರೀತವಾದ “ಗ್ಲೋ ” ಇಫ್ಫೆಕ್ಟ್ ಉಸಿರಾಗುವೆ ಹಾಡನ್ನು ಬಿಟ್ಟು ಎಲ್ಲ ದೃಶ್ಯಗಳ ಅಂದ ಕೆಡಿಸುತ್ತದೆ . ನಾಯಕಿ , ನಾಯಕನ ದೃಶ್ಯಗಳನ್ನು ಹೊರತುಪಡಿಸಿ ನಾಯಕನ ತಂದೆಯನ್ನು ಗ್ಲೋ ಇಫ್ಫೆಕ್ಟ್‌ಗೆ ಒಳಪಡಿಸುವುದು ಸರಿಯೆನಿಸುವುದಿಲ್ಲ . ಪ್ರೇಮಿಸುವ ದೃಶ್ಯಗಳಲ್ಲಿ ಮದುವೆ ಮುಂಜಿಯ ವಿಡಿಯೋಗಳಂತೆ ಕೃತಕವಾಗಿ ಸೃಷ್ಟಿಸಿದ ಗಾರ್ಡನ್ಗಳ ಬಳಕೆ ಸಹಜತೆಯಿಂದ ದೂರ ನಿಲ್ಲುತ್ತದೆ . ಉತ್ತರ ಕರ್ನಾಟಕದ ಪರಿಸರವನ್ನು ವಿಶೇಷವಾದ ಬಣ್ಣ ಬಳಕೆ ( ಕಲರ್ ಗ್ರೇಡಿಂಗ್ ) ಇಂದ ಶ್ರೀಮಂತಗೊಳಿಸಿದ್ದಾರೆ ಸಚಿನ್ .

ನಿರ್ದೇಶಕ ತನ್ನ ಕನಸನ್ನು ಹಾಕಿದ ಬಂಡವಾಳ ಮತ್ತು ಸಾಮಾನ್ಯ ಪ್ರೇಕ್ಷಕನ ಅಭಿರುಚಿಗಳೊಂದಿಗೆ ರಾಜಿ ಮಾಡಿಕೊಂಡಿರುವುದರಿಂದ ಶ್ರೇಷ್ಟತೆಯ ಮೆಟ್ಟಿಲುಗಳನ್ನೇರುವ ಅಪಾರ ಅವಕಾಶಗನ್ನು ತನ್ನೊಳಗೆ ಇಟ್ಟುಕೊಂಡಿದ್ದ ಕಥೆಯೊಂದು ನಿರೂಪಣೆ ಮತ್ತು ಚಿತಕಥೆಯಲ್ಲಿನ ತಪ್ಪುಗಳಿಂದಾಗಿ ಉತ್ತಮ ಪ್ರಯತ್ನ ವಾಗಷ್ಟೇ ಉಳಿಯುತ್ತದೆ . ಆದರೆ ನಿರ್ದೇಶಕರೇ ಹೇಳುವಂತೆ ಪ್ರಯೋಗಕ್ಕೆ ಸಾವಿದೆ ಪ್ರಯತ್ನಕ್ಕಲ್ಲ . ಒಂದೊಳ್ಳೆ ಸಿನಿಮಾ ಮಾಡುವ ತುಡಿತ ಇಡೀ ಸಿನಿಮಾದಲ್ಲಿ ನಿಮಗೆ ಕಾಣುತ್ತದೆ . ಆದಕ್ಕಾಗಿ ಸುನಿಗೆ ಶ್ಲಾಘನೆ . ವೇಗವಾಗಿ ಪಕ್ವಗೊಳ್ಳುತ್ತಿರುವ ಕನ್ನಡ ಕಮರ್ಶಿಯಲ್ ಸಿನೆಮಾ ಪ್ರಪಂಚಲ್ಲಿ ಬಹುಪರಾಕ್ ಮತ್ತೊಂದು ದಿಟ್ಟ ಹೆಜ್ಜೆ .

Filing income tax returns online

This is not exactly my write up but have used the below method last year . So thought it might do many of ma friends work easier  without paying a single penny . So pasting it for you guys !

Tax Filing in simple steps

Who can use these steps – People working for some private firm and have their Form 16 issued by the Employer. (concentrating on IT employes as they pay more tax :))

All you need before starting is
a. Your Form 16
b. PAN number

Lets Start now

1. Navigate to tax filing web site

https://incometaxindiaefiling.gov.in/e-Filing/UserLogin/LoginHome.html

2. Enter User ID and Password if you have it or click on Register Now and select Individual

3. Continue with registration of your PAN number and get your password.
4. Login to site with
Username : Your PAN
Password : **********
DOB : 01/01/2000 (Your DOB)

5. Click on ‘Quick e-File ITR’ in the left pane column

6. Select
ITR Form Name : ITR-1
Assessment Year : 2014-15

Address you need in your ITR-V form can be selected by
Prefill Address with
(best option is select : From PAN Database)

7. Read the Instructions (If interested only)
8. Clickbutton
9. Values to be entered in ‘Personal Information’ tab

 • A5. Gender : Male Or Female
 • A7. Income Tax Ward/Circle : (not required to enter details)
 • A15. Email Address : (personal id is always better, company id not preferable) (You will receive your ITR-V form on this id once done)
 • A16. Mobile Number : (enter your mobile number)
 • A18. Employer Category : Others (If working for some software firm)
 • A19. Tax Status : (dont change)
 • A20. Residential Status : RES – Resident (for Indian Resident)
 • A21. Return filed undr section : 11 – Before Due Dt 139(1) (If you are filling before 31 July 2013) (else you need to check Form Instructions)
 • A22. Whether Person governed by Portugese Civil Code under section 5A :(Most of the time No)(If its applicable to you then select Yes)
10. Clickbutton
11. Values to be entered in ‘Income Details’ tab
 • B1. Income from Salary/Pension : (enter the Income chargeable under the head salaries) (NOT Gross Salary) (Refer your Form 16, Part B for the row with ‘Income chargeable under the head salaries‘)
 • C1. to C17. : (Refer your Form 16, Part B and fill the values whichever is applicable)
12. Clickbutton
13. Values to be entered in ‘TDS’ tab
 • Tax Deduction Account Number (TAN) of the Employer : (Refer Part A of Form 16, TAN of the Deductor) (be careful don’t enter PAN of the Deductor)
 • Name of the Employer : (Refer Part A of Form 16)
 • Income Chargeable under the head Salaries : (Refer your Form 16, Part B for the row with ‘Income chargeable under the head salaries‘)
 • Total Tax Deducted : (Refer Part A of Form 16, Amount of tax deducted column)
14. Clickbutton
15. Values to be entered in ‘Taxes Paid and Verification’ tab
 • D16. Enter your bank account number : (enter account number)(this is for refund if any)
 • D17. Type of Account : (enter details)
 • D18. IFSC Code : (Google it if you don’t know)
 • D19. : (Yes is preferable)
 • D20 : (not required)
 • Place : (Enter Place)
16. Clickbutton
17. Values to be entered in ’80G’ tab
Enter details if any. Most of the time NO so I have not included steps here.
18. Before clicking on Submit verify that you have entered same values in
Step 11, B1. Income from Salary/Pension = Step 13 Income chargeable under head salaries
19. Also verify that Tax Payable is 0 in ‘Taxes Paid and Verification’ tab because your employer have already deducted all your taxes and paid to government.
20. Click on Submit and check your mail.
You have successfully filed your tax returns and your ITR-V will be sent to the email id specified by you.
Take a print of your ITR-V sign it and send it to address specified in the mail by ordinary post.

ಹೆಬ್ರಿ – ಕನ್ನಡ ವಿಕಿಪೀಡಿಯ

ನನ್ನೂರು ಹೆಬ್ರಿಯನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಕನಸು ಇವತ್ತು ನನಸಾಯಿತು . ಆಫೀಸ್ನಲ್ಲಿ ಮಧ್ಯಾಹ್ನ ಊಟದ ನಂತರ ಸೆಳೆಯುತಿದ್ದ ನಿದ್ರೆಯಿಂದ ಹೊರಬರಲು ಎತ್ತಿಕೊಂಡ ಕಾರ್ಯವನ್ನು ಈಗ ಮುಗಿಸಿದೆ . ಕೊನೆಗೂ ಸಂತೃಪ್ತಿ ! ಓದಿ . ನೋಡಬೇಕೆನಿಸಿದರೆ ಒಮ್ಮೆ ಬಂದು ಬಿಡಿ .

ಪವನಜ ಯು ಬಿ Time zone & Vehicle registration . ಈ ಎರಡು ಶೀರ್ಷಿಕೆಗಳನ್ನು ಕನ್ನಡದಲ್ಲಿ ಬರೆಯುವುದು ತಿಳಿಯಲಿಲ್ಲ . ಹೇಳಿಕೊಟ್ಟರೆ ಬದಲಾಯಿಸುತ್ತೇನೆ .

http://bit.ly/1lZTdn2

ಮೂಲ ಆಕೃತಿಯ ವಿಸ್ಮಯವೊಂದು ಪಡಿಯಚ್ಚನ್ನು ಸೋಕಿದಾಗ …..!

ಒಗ್ಗರಣೆ ನೋಡಿದೆ . ಸಿನೆಮಾ ನೋಡುತಿದ್ದಾಗ ಕಥೆ ಅನಾವರಣಗೊಳ್ಳುತಿದ್ದರೆ ನನಗೆ ಅನಂತ್ ನಾಗ್ , ಸೋಡಾ ಗ್ಲಾಸ್ ನಾಯಕಿಯೊಬ್ಬಳಿದ್ದ ಚಿತ್ರದ ಕಥೆಯ ಎಳೆ ಇದಕ್ಕೆ ಹೋಲುತ್ತಿದೆ ಎನ್ನುವಂತೆ ಭಾಸವಾಗುತಿತ್ತು . ಚಿತ್ರ ಮುಗಿಸಿಕೊಂಡು ಮನೆಗೆ ಬಂದು ಗೆಳೆಯ Harish Mallya ರೊಂದಿಗೆ ಚರ್ಚಿಸಿದಾಗ ಅದು ಗಣೇಶ ಐ ಲೌ ಯು ಎಂದು ಗೊತ್ತಯಿತು. ಗಣೇಶ ಐ ಲವ್ ಯೂ ಒಂದು ಕಾಲದಲ್ಲಿ ಪ್ರಸಿದ್ದಿಯಾದ ಫಣಿ ರಾಮಚಂದ್ರ ನಿರ್ದೇಶನದ ಗಣೇಶನ ಚಿತ್ರಗಳ ಸರಣಿಯ ಚಿತ್ರಗಳಲ್ಲೊಂದು . ಆ ಮಾತನ್ನು ಬದಿಗಿಟ್ಟು ನೋಡಿದರೆ ಸದ್ಯಕ್ಕೆ ಒಗ್ಗರಣೆ ಮಲಿಯಾಳಿ ಚಿತ್ರ ಸಾಲ್ಟ್ ಅಂಡ್ ಪೆಪ್ಪೆರ್ ನ ಕನ್ನಡ ಲೇಪಿತ ನಕಲು .
( ನಾನು ಮೂಲ ಚಿತ್ರವನ್ನು ನೋಡಿದ್ದು ಒಗ್ಗರಣೆಯನ್ನು ನೋಡಿದ ನಂತರ !)

screen568x568

ತೀರಾ ಸಣ್ಣ , ಅತೀ ಗಂಭೀರ ಕಥೆಯೊಂದಕ್ಕೆ ಸಿನೆಮಾಕ್ಕೆ ಬೇಕಾದ ಹೂರಣವನ್ನು ಬೆರೆಸಿ ಚಿತ್ರಕಥೆಯನ್ನಾಗಿಸಿರುವುದು ಸಿನೆಮಾದ ಹೆಚ್ಚುಗಾರಿಕೆ . ಅದೇ ಯಾವುದೇ ಸಿನೆಮಾವೊಂದರ ವೈಶಿಷ್ಟ ಕೂಡ ಹೌದು . ವೇದನೆಗಳು ವ್ಯಕ್ತವಾಗುವ , ಅದನ್ನು ಚಿತ್ರಿಸಿದ ಪರಿ ಮನಸ್ಸಿಗೆ ತಾಗುತ್ತವೆ. . ಅದೆಲ್ಲವೂ ಬೇರೆ ಬೇರೆ ಯಾಗಿ ಬೇರೆ ಬೇರೆ ಹಂತಗಳಲ್ಲಿ ಕಾಣುತ್ತ ಹೋಗುತ್ತದೆ . ನಾಯಕಿಗೆ ಕೊನೆಗೂ ದಕ್ಕಿದ ಪ್ರೀತಿಯೂ ಹೊಂದಿಕೆಯಾಗದ್ದು ಒಮ್ಮೆ ಚಿತ್ರಿತವಾದರೆ , ಮತ್ತೊಮ್ಮೆ ವಯಸ್ಸು ಮೀರುತ್ತಿರುವುದರಿಂದ ಸಮಾಜದಿಂದಾಗುವ ಮುಜುಗರದ ಚಿಂತೆ . ನಾಯಕನಿಗೂ ಹಾಗೆಯೇ . ಇಳಿವಯಸ್ಸಿನ ಏಕಾಂತಕ್ಕೆ ಸಿಕ್ಕಿದ ಹೆಣ್ಣು ಕೈತಪ್ಪಿದ ಭಾವ , ಬುಡಕಟ್ಟು ಜನಾಂಗದ ಹಿರಿಯನನ್ನು ಉಳಿಸಿಕೊಳ್ಳಲಾಗದ ಹತಾಶೆ ಹೀಗೆ .

ಚಿತ್ರದಲ್ಲಿ ಬರುವ ಬುಡಕಟ್ಟು ಮುದುಕನ ಕಥೆ ಕೆಲವೊಮ್ಮೆ ಪರಿಸ್ತಿತಿ ಕೈಮೀರಿದಾಗ ನಮ್ಮಿಂದ ಏನೋ ಮಾಡಲಾಗದ ಹತಾಶೆಯನ್ನು ಹೇಳಲು ಮಾತ್ರ ಉಪಯೋಗವಾಗಿದೆ . ಅದನ್ನು ಮೀರಿದ ಹೋರಾಟದ ಪ್ರಯತ್ನಕ್ಕೆ ಕೈಹಾಕದೆ ಈ ಉಪಕಥೆ ಮೂಲ ಕಥೆಯ ಪರಿಧಿಯೊಳಕ್ಕೆ ಅಸ್ಟೇನೂ ಸಮಂಜಸವೆನಿಸಲ್ಲ .
.ವೇದನೆಗಳು ಒಂದರಿಂದ ಇನ್ನೊಂದಕ್ಕೆ ಪಲ್ಲಟವಾಗುವುದೂ ಸ್ಪಸ್ಟತೆಯಿಲ್ಲದೆ ತೀರಾ ಅಸಹಜವೆನಿಸುತ್ತದೆ . ನಾಯಕ ಬುಡಕಟ್ಟು ಮುದುಕನನ್ನು ಉಳಿಸಿಕೊಳ್ಳಲಿಕ್ಕಾಗದೆ ತೀರಾ ಹತಾಶನಾಗುತ್ತಾನೆ . ಅದಕ್ಕೆಂದೇ ಮನೆಯ ಅಡುಗೆಯವನಿಗೂ ಬೈಯುತ್ತಾನೆ . ತಕ್ಷಣಕ್ಕೆ ಜೀಪಿನಲ್ಲಿ ಹೊರಹೋದಾಗ ಮೂಡುವ ಹಾಡು “ಬರೆಯದ ಸಾಲನು ಹೇಗೆ ಮರೆಯಲಿ” ಅವನಲ್ಲಿ ನಾಯಕಿಯನ್ನು ನೆನಪಿಸಿ ಅವನಲ್ಲಿ ವೇದನೆಯನ್ನು ಉಂಟುಮಾಡುತ್ತದೆ . ಅವನಿಗೆ ತಕ್ಷಣಕ್ಕೆ ಅವಳ ನೆನಪಾಗಲೂ ಯಾವ ಸ್ಪಸ್ಟ ಕಾರಣಗಳಿಲ್ಲ . ಅವರಿಬ್ಬರೂ ಕರೆ ನಿಲ್ಲಿಸಿ ಕೆಲ ದಿನಗಳಾಗಿರುತ್ತದೆ . ನಾಯಕಿಯ ವಿಷಯದಲ್ಲೂ ಹಾಗೆಯೇ ಅವಳು ನಾಯಕನ ಕರೆಯ ಪ್ರಪಂಚದಿಂದ ಸ್ವಲ್ಪ ಮಟ್ಟಿಗೆ ಹೊರ ಬಂದಿರುತ್ತಾಳೆ . ನಂತರದಲ್ಲಿ ಅವಳ ಮನಸ್ಸಿನಲ್ಲಿ ಮೂಡುವ ತಳಮಳ ಸಮಾಜದ ಪ್ರತಿಕ್ರಿಯೆಗಳ ಉದ್ದೇಶಿತವಾಗಿರುತ್ತದೆ . ಅದನ್ನ ಹೇಳಲು ನಿರ್ದೇಶಕ ಪಾರ್ಲರ್ ಗೆ ಬರುವ ಮುಸ್ಲಿಂ ಮಹಿಳೆಯ ಸನ್ನಿವೇಶ ವನ್ನು ಸೃಸ್ತಿಸಿದ್ದಾನೆ . ಆದರೆ ನಂತರ ಬರುವ ದೃಶ್ಯಗಳಲ್ಲಿ ಯಾವುದೇ ಪೂರ್ವ ಪೀಟಿಕೆ ಇಲ್ಲದೆ ಅವಳ ವೇದನೆ ನಾಯಕನ ನೆನಪಿಗೆ ಬದಲಾವಣೆಗೊಳ್ಳುತ್ತದೆ .

ಚಿತ್ರದ ನ್ಯೂನ್ಯತೆಗಳನ್ನು ನಾಜೂಕಾದ ಚಿತ್ರಕಥೆ , ಪಾತ್ರಗಳ ಅಭಿನಯ ಮರೆಸುತ್ತದೆ. ಪ್ರಕಾಶ್ ರೈಗೆ ವ್ಯಕ್ತಿಗವಾಗಿರುವ ಗಡಸುತನ , ಊರ್ವಶಿಯ ಮಲಿಯಾಳಂ ಉಚ್ಚಾರಣೆಯಲ್ಲಿರುವ ಕನ್ನಡ , ಸಂಯುಕ್ತ ಹೊರನಾಡ್ ಅಂದ ಎಲ್ಲವೂ ಇಸ್ಟವಾಗಬಹುದು. ಸಂಚಾರಿ ವಿಜಯ್ ( Sanchari Vijay ) ಎಂಬ ಭರವಸೆಯ ನಟ ಆಗಾಗ ತನ್ನದಲ್ಲದ ಪಾತ್ರದಲ್ಲಿ ಸೆಳೆಯುತ್ತಾನೆ . ಪ್ರೀತಾ ಕ್ಯಾಮರ ಕಣ್ಣು ಮನೆಯೊಳಗಿನ ಪ್ರೀತಿಯನ್ನು , ದುಗುಡವನ್ನು ಶ್ರದ್ದೆಯಿಂದ ಸೆರೆಹಿಡಿದಿದೆ . ವಿಶೇಷವಾಗಿ ” ಮನದಿ ಬೆಳಗಾಯಿತೆ ” ಹಾಡಿನಲ್ಲಂತೂ ಅದ್ಭುತ ಬೆಳಕಿನ ಸಂಯೋಜನೆಯಿಂದ ಪರದೆಯನ್ನು ಬೆಳಗುತ್ತಾರೆ ಛಾಯಾಗ್ರಹಕರು . ಇಡೀ ಚಿತ್ರದಲ್ಲಿ , ಅದರಲ್ಲೂ ಹಾಡುಗಳಿಗೆ ಮಾಡಿರುವ ಕಲರ್ ಗ್ರೇಡಿಂಗ್ ಮನಸೆಳೆಯುತ್ತದೆ . ” ಮನದಿ ಬೆಳಗಾಯಿತೆ ” ಹಾಡಲ್ಲಂತೂ ಬೆಳಕು ಮತ್ತು ಬಣ್ಣಗಳ ಬಳಕೆ ನೋಡುವುದೇ ಕಣ್ಣಿಗೆ ಹಬ್ಬ . ಸಂಕಲನಕಾರ ಜೊ ನಿ ಹರ್ಷ ತನ್ನ ಕರಾರುವಕ್ಕಾದ ದೃಶ್ಯಗಳ ಜೋಡಣೆಯಿಂದ ಎಲ್ಲೆಡೆ ನೆಲೆಸಿದ್ದಾರೆ . ಇಳಯರಾಜ ಸಂಗೀತ ಕಾಲಕ್ಕಿಂತ ಮುಂದಿದೆ .! . ಚಿತ್ರದ ಮೊದಲಾರ್ಧಕ್ಕೆ ಅಡುಗೆ ಬೆರೆತುಕೊಂಡಸ್ಟು ದ್ವಿತೀಯಾರ್ಧಕ್ಕೆ ಬೆರೆತುಕೊಂಡಿಲ್ಲ . ಹಾಗಾಗಿ ಒಗ್ಗರಣೆ ಎಂಬ ಶೀರ್ಷಿಕೆ ಆಕರ್ಷಣೆಗಸ್ಟೆ ಉಳಿಯುತ್ತದೆ .

ಚಿತ್ರದಲ್ಲಿ ಜೀರ್ಣಿಸಲಾಗದ್ದು ಅನ್ನುವುದೊಂದಿದ್ದರೆ ಅದು ದೃಶ್ಯಕ್ಕೆ ಸಿಂಕ್ ಆಗದ ಮಾತುಗಳು . ಮೊದಲಾರ್ಧದಲ್ಲಂತೂ ಅದು ಕಣ್ಣಿಗೆ ರಾಚುತ್ತದೆ . ದ್ವಿತೀಯಾರ್ಧದಲ್ಲಿ ಕನ್ನಡದ ನಟರು ಜಾಸ್ತಿ ಬರುವುದರಿಂದ ಅದು ಅಸ್ಟು ಅರಿಯದಂತಿದೆ . ಚಿತ್ರ ತಂಡ ಮೂರು ಭಾಷೆ ಗಳಲ್ಲಿ ಎಲ್ಲಾ ದೃಶ್ಯಗಳನ್ನು ಚಿತ್ರಿಸಿದೆ ಎನ್ನುವುದನ್ನು ಹೇಳಿದರೂ ಪರದೆಯ ಮೇಲೆ ಅದು ಮೂಡದಿದ್ದರೆ ಅದನ್ನು ನಂಬುವಸ್ಟು ಪ್ರೇಕ್ಷಕ ಮೂರ್ಖನೇ ? . ಡಬ್ಬಿಂಗ್ ವಿರೋಧಿಸಲು ಹಿರಿಯರಾದ ಬೀಸು ಕೊಟ್ಟ ಒಂದು ಕಾರಣ ತುಟಿಚಲನೆ ಹೊಂದಿಕೆಯಾಗದೆ ನಮ್ಮ ಭಾಷೆ ಹಾಳಾಗುತ್ತದೆ ಎಂಬುದು . ವಿಪರ್ಯಾಸ ಎಂದರೆ ಬೀಸು ಕೊಟ್ಟ ಧ್ವನಿಯೇ ಪಾತ್ರಧಾರಿಯ ಧ್ವನಿಗೆ ಹೊಂದಿಕೆಯಾಗುವುದಿಲ್ಲ . ನನ್ನ ಉದ್ದೇಶ ಯಾರಾ ಮೇಲೂ ಅಪವಾದ ಹೊರಿಸುವುದಲ್ಲ . ಕಂಡದ್ದನ್ನು ತಿರುಚದೆ ಹೇಳಿದ್ದೇನೆ ಅಸ್ಟೇ .

ಅಂದವಿರುವ ಮನೆಯಂತೆ ಇನ್ನೊಂದನ್ನು ಕಟ್ಟುವುದು ಸುಲಭ . ಮೂಲ ರೂಪಕ್ಕೆ ಧಕ್ಕೆಯಾಗದಂತೆ ಜಾಗರೂಕರಾಗಿರಬೇಕಸ್ಟೆ . ಅದನ್ನು ಅನುಭವಿ ಪ್ರಕಾಶ್ ರೈ ಅಚ್ಚುಕಟ್ಟಾಗಿ ಮಾಡಿದ್ದಾರೆ . ಪ್ರಕಾಶ್ ರಾಜ್ ಆಗಿದ್ದ ರೈ ಕನ್ನಡದಲ್ಲಿ ಪ್ರಕಾಶ್ ರೈ ಆಗಿಯೇ ಇದ್ದಾರೆ . ಆದರೆ ಬದಲಾವಣೆ ಬಯಸದ ಅವರ ಸಹಿ ಮಾತ್ರ ಪ್ರಕಾಶ್ ರಾಜ್ ಆಗಿಯೇ ಉಳಿದುಕೊಂಡಿದೆ .

ನಾವೇಕೆ ಆಶಾವಾದಿಗಳಾಗಬಾರದು ?

ಇಂದು ಬೆಳಿಗ್ಗೆ ಮಹಿಳಾ ಕವಿಯೊಬ್ಬರು ನಾನು ಅವರ ಪೋಸ್ಟ್‌ಗೆ ಹಾಕಿದ ಸೌಜನ್ಯ ಮೀರದ ಕಾಮೆಂಟನ್ನು ಕೂಡ ಅರಗಿಸಿಕೊಳ್ಳಲಾಗದೆ ನನ್ನನ್ನು unfriend ಮಾಡಿದ್ದಾರೆ . ಅದು ಅವರ ಆಯ್ಕೆ . ಅದರಿಂದ ನಂಗೇನೂ ಬೇಸರವಿಲ್ಲ . ಅವರಿಂದ ನನ್ನ ಬೆಳಗಾಗುವುದಿಲ್ಲ . ನನ್ನ ಗೆಳೆಯರಿಗೆ ಗೊತ್ತಿರುವಂತೆ ನನ್ನ ಚಿಂತನೆ , ಅಭಿಪ್ರಾಯಗಳು ಎಡ ಬಲದ ನಡುವಿನ ಸತ್ಯದೊಂದಿಗೆ ಇರುತ್ತದೆ ವಿನಾ ಒಂದೆಡೆ ವಾಲಿಕೊಂಡಿರುವುದಿಲ್ಲ . ಯಾಕೆಂದರೆ ಅದು ನನ್ನ ನಂಬಿಕೆಗೆ ವಿರುದ್ದ . ವಾಲಿಕೊಂಡಿರುವುದು ನಾನು ಗ್ರಹಿಸಿದಂತೆ ಭಯಾನಕ ಕೂಡ . ಎಲ್ಲಿ ಹುಳುಕಿದೆಯೋ ಅದನ್ನು ಹೇಳಿದರೆ ತಪ್ಪೇನು ?ಕೇಳಿಸಿಕೊಳ್ಳುವ ಗುಣವಿರದಿದ್ದರೆ ದೊಡ್ಡವರಾಗುವುದಿಲ್ಲ ಅಲ್ಲವೇ ? ನಮ್ಮಲ್ಲಿರುವುದು ಅಭಿಪ್ರಾಯ ಭೇದವಸ್ಟೆ . ಅದಕ್ಕೂ ಮಿಗಿಲಾದ ಮಾನವೀಯತೆ ಇದೆ ಎಲ್ಲರಲ್ಲೂ . ಇಂತಹ ನಡೆ ವೈಯಕ್ತಿಕವಾಗಿ ಅವರ ಮೇಲಿನ , ಅವರ ಸಾಹಿತ್ಯದ ಮೇಲಿನ ನನ್ನ ಪ್ರೀತಿಯನ್ನು ಕಡಿಮೆಗೊಳಿಸುತ್ತದೆ .
ಸಮುದಾಯದ ಪ್ರತಿಕ್ರಿಯೆಯೊಂದಕ್ಕೆ ವೈಯಕ್ತಿಕ ಅಭಿಪ್ರಾಯ ತಿಳಿಸುವ ಹಕ್ಕು ಭಾರತದ ಪ್ರತಿಯೊಂದು ಪ್ರಜೆಗಿದೆ . ಆದರೆ ಆ ಅಭಿವ್ಯಕ್ತಿಗು ಒಂದು ಎಲ್ಲೆ ಇದೆ . ಮಾತುಗಳು ಹಿಡಿತ ತಪ್ಪಿದಾಗ ಉಗ್ರ ಪ್ರತಿಭಟನೆಯನ್ನೂ ಎದುರಿಸಬೇಕಾಗುತ್ತದೆ . ಪ್ರಚೋದನಗೆ ಪ್ರತಿಕ್ರಿಯೆ ಪ್ರಕೃತಿಯ ನಿಯಮ . 
ಜನತೆಯ ತೀರ್ಪನ್ನು ಒಪ್ಪುವುದು ಬಿಡಿ , ಕನಿಸ್ಟ ಗೌರವಿಸುವ ಸೌಜನ್ಯವಿಲ್ಲ . ಬದಲಾಗಿ ಇತಿಹಾಸದಲ್ಲಿ ತಮಗೆ ಸಂಬಂದ ಪಡದ್ದನ್ನು ವಿಂಗಡಿಸಿ ತಮಗೆ ಸರಿ ಎನಿಸಿದ್ದನ್ನು ಮಾತ್ರ ಹೆಕ್ಕಿ ಹೆಕ್ಕಿ ತೆಗೆದು ವಿಷ ಕಾರುತಿದ್ದಾರೆ . ನನಗೆ ಬೇಸರವಾಗುವುದು ಓದಿ ತಿಳಿದುಕೊಂಡವರು ತಮ್ಮ ವಿಷಯ ಆಯ್ಕೆ ಮತ್ತು ಮಂಡನೆಯಲ್ಲಿ ತೀರಾ ಸೆಲೆಕ್ಟಿವ್ ಆದಾಗ . ಒಬ್ಬರು ಸೋತವರಲ್ಲಿ ಕನಸುಗಳಿವೆ , ಮೋದಿಯಲ್ಲಿ ಕನಸುಗಳಿಲ್ಲ ಎನ್ನುತ್ತಾರೆ . ಈ ದೇಶದ ಅಭ್ಯುದಯದ ಬಗ್ಗೆ ಕನಸಿರದ ಕಣ್ಣುಗಳಿವೆಯೇ ? . ಮತ್ತೊಬ್ಬರು ಫಲಿತಾಂಶದ ದಿನ ಬ್ಲ್ಯಾಕ್ ಫ್ರೈಡೇ ಎಂದು ಹೇಳಿ ಭಾರತಕ್ಕೆ ಶ್ರದ್ದಾಂಜಲಿ ಅರ್ಪಿಸುತ್ತಾರೆ . ದೇಶ ಕಂಡ ಪ್ರಭುದ್ದ ನಾಯಕನೊಬ್ಬನನ್ನು “ಕವಿಯೆಂದು ಹೇಳಿಕೊಂಡು ಅನಗತ್ಯವಾಗಿ ಕಾರ್ಗಿಲ್ ಯುದ್ಧ ಮಾಡಿದ, 89ವರ್ಷದ ಢೋಂಗಿ ವಾಜಪೇಯಿ” ಎಂದು ತಮ್ಮ ಎಲುಬಿರದ ನಾಲಿಗೆಯಿಂದ ಬಾಯಿಗೆ ಬಂದಂತೆ ತೆಗಳುತ್ತಾರೆ .ಕನ್ನಡ ಕಂಡ ಶ್ರೆಸ್ಟ ಕಾದಂಬರಿಕಾರರಲ್ಲೊಬ್ಬರಾದ ಬೈರಪ್ಪನವರನ್ನು ಮೋದಿಯ ಜಗದ್ಗುರುವಿನಂತೆ ವರ್ತಿಸುವ ಭಟ್ಟಂಗಿ ಎನ್ನುತ್ತಾರೆ . 
ವಾಜಪೇಯಿ ಕಾರ್ಗಿಲ್ ಗಾಗಿ ಮಾಡಿದ್ದು ಅನಗತ್ಯವೆಂದುಕೊಂಡರೆ , ಇಂಡಿಯಾ ಸೈನೊ ಯುದ್ದಕ್ಕೆ ನಮ್ಮ ಸೈನಿಕರನ್ನು ಸಾಯಲು ಕಳಿಸಿಕೊಟ್ಟು ಗುಲಾಬಿಯ ಪರಿಮಳ ಹೀರುತ್ತಾ ಶಾಂತಿ ಪಾರಿವಾಳಗಳನ್ನು ಹಾರಿ ಬಿಟ್ಟವರು ಮಹಾಪಾಪಿಗಳು ಆಗುತ್ತಾರೆ . ನಾನೆಂದೂ ಗುಜರಾತ್ ನರಮೇಧವನ್ನು ಸಮರ್ಥಿಸಿಲ್ಲ . ಯಾಕೆಂದರೆ ನಾನು ಗೌರವಿಸುವುದು ಸತ್ಯವನ್ನು ಮಾತ್ರ . ಒಂದು ಅಧಿಕಾರ ಕೇಂದ್ರ ಕೋಮುಗಲಭೆಯನ್ನು ತಡೆಗಟ್ಟಲಾಗ್ದ್ದು ಅಕ್ಷಮ್ಯ . ಮೋದಿಯ ಆಯ್ಕೆ ನಮ್ಮ ಸಂವಿದಾನ ಬದ್ದವಾಗಿಯೇ ಆಗಿದೆ . ಅದಕ್ಕೆ ಬಹುಮತದ ಮುದ್ರೆ ಇದೆ . ಜನರ ನಂಬಿಕೆ , ಪ್ರಜಾಪಾಭುತ್ವದ ತಳಹದಿಯನ್ನೇ ಕಗ್ಗೊಲೆ ಮಾಡಿ ತುರ್ತು ಪರಿಸ್ತಿತಿ ಹೇರಿದ ಜನ ಇನ್ನೂ ಕಟುಕರಾಗುತ್ತಾರೆ .

ಮತ್ತೊಬ್ಬರು ಕವಯಿತ್ರಿ ಅಮರೇಶ್ ಮಿಶ್ರ ಅವರನ್ನು ಮೋದಿ , ಆರ್ ಎಸ್ ಎಸ್ ವಿರುದ್ದ ಟ್ವಿಯರ್ ನಲ್ಲಿ ಮಾತಾಡಿಡಕ್ಕಾಗಿ ಬಂಧಿಸಲಾಗಿದೆ ಎಂದು ಬೊಬ್ಬೆ ಹಾಕುತ್ತಾರೆ . ಅಯ್ಯೋ ಇದು ಅಭಿವ್ಯಕ್ತಿ ಸ್ವಾತಂತ್ರದ ಹರಣ ಎನ್ನುತ್ತಾರೆ . ಆದರೆ ಅಮರೇಶ್ ಮಿಶ್ರ ಅವರ ಟ್ವಿಯರ್ ಅಕೌಂಟ್ ನೋಡಿದ್ದೀರಾ ? ಮೋದಿಯ ಬೆಂಬಲಿಗರನ್ನು ಅವರವರ ತಾಯಿಯ ಎದುರು ಕೊಲ್ಲಬೇಕು ಎನ್ನುತ್ತಾರೆ ಅಮರೇಶ್ ಮಿಶ್ರ . ಇಂತವರನ್ನು ಹೇಗೆ ಸಹಿಸಿಕೊಳ್ಳುವುದು . ಇದಾವುದೂ ನಮ್ಮ ಸೊ ಕಾಲ್ಡ್ ತಿಳಿದುಕೊಂಡವರ ಕಣ್ಣಿಗೆ ಕಾಣುವುದಿಲ್ಲ .

ಇವರೆಲ್ಲರ ಡಾಳು ನನ್ನನ್ನು ಕಂಗೆಡಿಸುವಂತೆ ಮೋದಿಯ ಉದಯದೊಂದಿಗೆ ಜೀವ ಪಡೆದುಕೊಂಡಿರುವ ಮೋದಿ ಕ್ರಿಮಿಗಳ ಹುಚ್ಚಾಟ , ಭಟ್ಟಂಗಿತನ ನೋಡಿದರೆ ಭಯವಾಗುತ್ತದೆ . ಅನಂತ ಮೂರ್ತಿಯವರಿಗೆ ಪಾಕಿಸ್ತಾನದ ಟಿಕೆಟ್ ಕಳುಹಿಸಿಕೊಡುವ . ಮನಮೋಹನ ಸಿಂಘ್ರನ್ನು ಶಂಡರೆನ್ನುವ , ಗೌರವಯುತ ಹೆಣ್ಣುಮಗಳಿಗೆ ಖಾಲಿ ಶಿಲುಬೆಯ ಹಿಂದೆ ಚಕ್ಕಂದವಾಡುವವರು ಎಂಬ ಹಣೆಪಟ್ಟಿ ಕಟ್ಟುವವರು ಹುಟ್ಟಿಕೊಂಡಿದ್ದಾರೆ . ಇಂತಹ ಮಾತುಗಳು ಆಡಿದವರ ಹುಟ್ಟನ್ನು ತೋರಿಸುತ್ತವೆಯೇ ವಿನಾ ಮತ್ತೇನೂ ಅಲ್ಲ . 
ಸೈದ್ದಾಂತಿಕ ವಿರೋಧಗಳಿದ್ದರೆ ಅದನ್ನು ಸುಸಂಸ್ಕೃತರಾಗಿ ವ್ಯಕ್ತಪಡಿಸಿ . ಅದಕ್ಕೊಂದು ಮಾದರಿ ನಿನ್ನೆ outlook india ಕ್ಕೆ ನಂದಿತಾ ದಾಸ್ ಬರೆದ ಅಂಕಣ “Silence Is Deafening, Are My Fears Unfounded?” . ಅವರೆಸ್ಟು ಸ್ಪಸ್ಟ ವಾಗಿ ತನ್ನ ಅಂಜಿಕೆಯನ್ನು ಹೇಳಿದ್ದಾರೆಂದರೆ ನಿಮಗೂ ಅವರ ಮಾತಿನ ಸತ್ಯವನ್ನು ಮತ್ತೊಮ್ಮೆ ವಿಮರ್ಶಿಸಲು ಪ್ರೇರೇಪಿಸುತ್ತದೆ . ಅವರ ಯಾವ ಮಾತು ಆಪಥ್ಯವೆನಿಸುವುದಿಲ್ಲ . ನಮ್ಮೆಲ್ಲರ ಅನಿಸಿಕೆ ಅಂಜಿಕೆಗಳು ಹಾಗೆಯೇ ವ್ಯಕ್ತವಾದರೆ ನಮ್ಮ ಸಂವಿದಾನದ ಆಶಯವೂ ಈಡೇರುತ್ತದೆ . ಅದನ್ನು ಬಿಟ್ಟು ನಾವೇಕೆ ಯಾವಾಗಲೂ ಪೂರ್ವಾಗ್ರಹ ಪೀಡಿತರಾಗಿ ವರ್ತಿಸುತ್ತೇವೆ ? . ತುರ್ತು ಪರಿಸ್ಥಿತಿಯ , ಸಿಖ್ ನರಮೇಧವೂ ನಂತರವೂ ಕಾಂಗ್ರೆಸ್ಸನ್ನು ಕ್ಷಮಿಸಿ ನಮ್ಮನ್ನು ಆಳಲು ಬಿಡಲಿಲ್ಲವೆ ? . ಮೋದಿಗೂ ಒಂದು ಅವಕಾಶ ನೀಡಬಾರದೇಕೆ ? . ನಾವೇಕೆ ಆಶಾವಾದಿಗಳಾಗಬಾರದು ? . ಮೋದಿ ಕಂಡ ಕನಸು ನಿಜವಾಗಿಯೂ ಒಂದೇ ಭಾರತ ಶ್ರೆಸ್ಠ ಭಾರತದ ಕನಸಾಗಿದ್ದರೆ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ . ಹಾಗಾಗಲಿ ಎಂದು ಆಶಿಸುವುದರಲ್ಲಿ ತಪ್ಪೇನು ಇಲ್ಲವಲ್ಲ . ?
ಮೋಡ ಈಗಸ್ಟೆ ಕಟ್ಟಿದೆ . ಮಳೆ ಹನಿಯಲು ಸಮಯವಿದೆ . ಕಾಯುವ ತಾಳ್ಮೆಯಿರಲಿ . ಸಂವಿಧಾನ ಒಂದೇ ಧರ್ಮವಾಗಿರಲಿ .

ಟಾಗೋರ್ ಕವಿತೆಯ ಅನುವಾದ

ಇಂದೇಕೋ ನಾನು ನಿನ್ನನ್ನು ಅಸಂಖ್ಯ ವಿಧಗಳಲ್ಲಿ , 

ತೆರ ತೆರನಾಗಿ , ಎಣಿಸಲಾಗದಸ್ಟು ಬಾರಿ ,
ಜೀವಿತದಲ್ಲಿ ಮತ್ತು ಜೀವಿತದಾಚೆಗೂ ,
ಯುಗ ಯುಗಾಂತರಗಳಲ್ಲೂ
ನಿರಂತರವಾಗಿ ಪ್ರೀತಿಸಿದಂತೆ ಭಾಸವಾಗುತ್ತಿದೆ . – ಟಾಗೋರ್

“I seem to have loved you in numberless forms, numberless times, in life after life, in age after age forever.”
― Rabindranath Tagore